| |
|
|
| |
|
|
| |
ನನ್ನ ಪ್ರೀತಿಯ ಸಹ ನಾಗರಿಕರೇ, |
|
| |
|
|
| |
ಚೈತನ್ಯ ಮತ್ತು ಉತ್ಸಾಹದಿಂದ ತುಂಬಿದ ಹಬ್ಬ ದೀಪಾವಳಿಯ ಶುಭ ಸಂದರ್ಭದಲ್ಲಿ ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಅಯೋಧ್ಯೆಯಲ್ಲಿ ರಾಮಮಂದಿರದ ಭವ್ಯ ನಿರ್ಮಾಣದ ನಂತರದ ಎರಡನೇ ದೀಪಾವಳಿ ಇದು. ಭಗವಾನ್ ಶ್ರೀರಾಮನು ನಮಗೆ ಸದಾಚಾರವನ್ನು ಎತ್ತಿಹಿಡಿಯಲು ಕಲಿಸುತ್ತಾನೆ ಮತ್ತು ಅನ್ಯಾಯದ ವಿರುದ್ಧ ಹೋರಾಡಲು ಧೈರ್ಯವನ್ನೂ ನೀಡುತ್ತಾನೆ. ಕೆಲವು ತಿಂಗಳುಗಳ ಹಿಂದೆ ಆಪರೇಷನ್ ಸಿಂಧೂರ ಸಮಯದಲ್ಲಿ ನಾವು ಇದರ ಜೀವಂತ ಉದಾಹರಣೆಯನ್ನು ನೋಡಿದ್ದೇವೆ. ಆಪರೇಷನ್ ಸಿಂಧೂರ ಸಮಯದಲ್ಲಿ, ಭಾರತವು ಸದಾಚಾರವನ್ನು ಎತ್ತಿಹಿಡಿದಿದ್ದು ಮಾತ್ರವಲ್ಲದೆ ಅನ್ಯಾಯದ ವಿರುದ್ಧ ಸೇಡು ತೀರಿಸಿಕೊಂಡಿತು. |
|
| |
|
|
| |
ಈ ದೀಪಾವಳಿ ವಿಶೇಷ ಏಕೆಂದರೆ, ಮೊದಲ ಬಾರಿಗೆ ದೇಶಾದ್ಯಂತ ಅನೇಕ ಜಿಲ್ಲೆಗಳಲ್ಲಿ, ದೂರದ ಪ್ರದೇಶಗಳಲ್ಲಿಯೂ ಸಹ ದೀಪಗಳನ್ನು ಬೆಳಗಿಸಲಾಗುತ್ತದೆ. ಇವು ನಕ್ಸಲಿಸಂ ಮತ್ತು ಮಾವೋವಾದಿ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಿದ ಜಿಲ್ಲೆಗಳಾಗಿವೆ. ಇತ್ತೀಚಿನ ದಿನಗಳಲ್ಲಿ, ನಮ್ಮ ದೇಶದ ಸಂವಿಧಾನದಲ್ಲಿ ನಂಬಿಕೆಯನ್ನು ಇಟ್ಟು ಹಿಂಸೆಯ ಮಾರ್ಗವನ್ನು ತ್ಯಜಿಸಿ ಅಭಿವೃದ್ಧಿಯ ಮುಖ್ಯವಾಹಿನಿಗೆ ಸೇರುತ್ತಿರುವ ಅನೇಕ ವ್ಯಕ್ತಿಗಳನ್ನು ನಾವು ನೋಡಿದ್ದೇವೆ. ಇದು ರಾಷ್ಟ್ರಕ್ಕೆ ಒಂದು ಪ್ರಮುಖ ಸಾಧನೆಯಾಗಿದೆ. |
|
| |
|
|
| |
ಈ ಐತಿಹಾಸಿಕ ಸಾಧನೆಗಳ ಮಧ್ಯೆ, ದೇಶವು ಇತ್ತೀಚೆಗೆ ಮುಂದಿನ ಪೀಳಿಗೆಯ ಸುಧಾರಣೆಗಳನ್ನು ಸಹ ಪ್ರಾರಂಭಿಸಿದೆ. ನವರಾತ್ರಿಯ ಮೊದಲ ದಿನದಂದು ಕಡಿಮೆಯಾದ ಜಿ ಎಸ್ ಟಿ ದರಗಳನ್ನು ಜಾರಿಗೆ ತರಲಾಯಿತು. ಈ "ಜಿ ಎಸ್ ಟಿ ಉಳಿತಾಯ ಉತ್ಸವ" ದ ಸಮಯದಲ್ಲಿ ನಾಗರಿಕರು ಸಾವಿರಾರು ಕೋಟಿ ರೂಪಾಯಿಗಳನ್ನು ಉಳಿಸುತ್ತಿದ್ದಾರೆ. |
|
| |
|
|
| |
ಹಲವಾರು ಬಿಕ್ಕಟ್ಟುಗಳನ್ನು ಎದುರಿಸುತ್ತಿರುವ ಜಗತ್ತಿನಲ್ಲಿ, ಭಾರತ ಸ್ಥಿರತೆ ಮತ್ತು ಸೂಕ್ಷ್ಮತೆಯ ಸಂಕೇತವಾಗಿ ಹೊರಹೊಮ್ಮಿದೆ. ಮುಂದಿನ ದಿನಗಳಲ್ಲಿ ನಾವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ ಹಾದಿಯಲ್ಲಿದ್ದೇವೆ. |
|
| |
|
|
| |
"ವಿಕಸಿತ” (ಅಭಿವೃದ್ಧಿ ಹೊಂದಿದ) ಮತ್ತು "ಆತ್ಮನಿರ್ಭರ” (ಸ್ವಾವಲಂಬಿ) ಭಾರತದ ಕಡೆಗಿನ ಈ ಪ್ರಯಾಣದಲ್ಲಿ, ನಾಗರಿಕರಾಗಿ ನಮ್ಮ ಪ್ರಾಥಮಿಕ ಜವಾಬ್ದಾರಿಯೆಂದರೆ ರಾಷ್ಟ್ರದ ಕಡೆಗೆ ನಮ್ಮ ಕರ್ತವ್ಯಗಳನ್ನು ಪೂರೈಸುವುದು. |
|
| | |
| |
"ಸ್ವದೇಶಿ" (ಸ್ಥಳೀಯ ಉತ್ಪನ್ನಗಳು) ಅಳವಡಿಸಿಕೊಳ್ಳೋಣ ಮತ್ತು ಹೆಮ್ಮೆಯಿಂದ ಘೋಷಿಸೋಣ: "ಇದು ಸ್ವದೇಶಿ!" "ಏಕ ಭಾರತ, ಶ್ರೇಷ್ಠ ಭಾರತ" ಎಂಬ ಮನೋಭಾವವನ್ನು ಉತ್ತೇಜಿಸೋಣ. ಎಲ್ಲಾ ಭಾಷೆಗಳನ್ನು ಗೌರವಿಸೋಣ. ಸ್ವಚ್ಛತೆಯನ್ನು ಕಾಪಾಡಿಕೊಳ್ಳೋಣ. ನಮ್ಮ ಆರೋಗ್ಯಕ್ಕೆ ಆದ್ಯತೆ ನೀಡೋಣ. ನಮ್ಮ ಅಡುಗೆ ಎಣ್ಣೆಯ ಬಳಕೆಯನ್ನು ಶೇ. 10 ರಷ್ಟು ಕಡಿಮೆ ಮಾಡೋಣ ಮತ್ತು ಯೋಗವನ್ನು ಅಳವಡಿಸಿಕೊಳ್ಳೋಣ. ಈ ಎಲ್ಲಾ ಪ್ರಯತ್ನಗಳು ನಮ್ಮನ್ನು "ವಿಕಸಿತ ಭಾರತ"ದತ್ತ ವೇಗವಾಗಿ ಕೊಂಡೊಯ್ಯುತ್ತವೆ. |
|
| |
|
|
| |
ಒಂದು ದೀಪದಿಂದ ಮತ್ತೊಂದು ದೀಪವನ್ನು ಬೆಳಗಿಸಿದಾಗ ಅದರ ಬೆಳಕು ಕಡಿಮೆಯಾಗುವುದಿಲ್ಲ, ಬದಲಾಗಿ ಹೆಚ್ಚಾಗುತ್ತದೆ ಎಂಬುದನ್ನು ದೀಪಾವಳಿಯು ನಮಗೆ ಕಲಿಸುತ್ತದೆ. ಈ ಮನೋಭಾವದಿಂದ, ಈ ದೀಪಾವಳಿಯಂದು ನಮ್ಮ ಸಮಾಜ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಮರಸ್ಯ, ಸಹಕಾರ ಮತ್ತು ಸಕಾರಾತ್ಮಕತೆಯ ದೀಪಗಳನ್ನು ಬೆಳಗಿಸೋಣ.
ಮತ್ತೊಮ್ಮೆ, ನಿಮ್ಮೆಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು. |
|
| |
|
|
| |
ನಿಮ್ಮ,
ನರೇಂದ್ರ ಮೋದಿ |
|
| |
 |
|
| |
|
|
| |
 |
|
| |
|
|
| |
ಈ ಪತ್ರವನ್ನು ನಿಮ್ಮ ಇಷ್ಟದ ಭಾಷೆಯಲ್ಲಿ ಓದಿ |
|
| |
|
|
| |
|
|
| |
|
|
| |
|
|
|
| |